🌺 ಜ್ಞಾನವೇ ಸರ್ವತ್ರ ಪ್ರಕಾಶಿಸುವ ಬೆಳಕು! 🌺

🌺 ಜ್ಞಾನವೇ ಸರ್ವತ್ರ ಪ್ರಕಾಶಿಸುವ ಬೆಳಕು! 🌺
“ಜ್ಞಾನ ಮಾತ್ರ ಸರ್ವತ್ರ ಪ್ರಕಾಶಿಸುತ್ತದೆ” — ಪರಮಪೂಜ್ಯ ಶ್ರೀ ನಾರಾಯಣ ಗುರುವರ್ಯರ ಈ ಮಹತ್ವದ ಸಂದೇಶ ನನ್ನ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿದೆ.
ಗುರುದೇವರ ಕುರಿತಾದ ಗ್ರಂಥಗಳು ಕೇವಲ ಓದಿನ ವಸ್ತುಗಳಲ್ಲ…
ಅವು ಜ್ಞಾನವನ್ನು ಅರಿಯಲು, ಸತ್ಯವನ್ನು ತಿಳಿಯಲು ಮತ್ತು ನಿಜದ ಹಾದಿಯಲ್ಲಿ ನಡೆಯಲು ತೋರಿದ ಕಿರುದಾರಿಗಳು. 📚🙏
ಗೌರವಾನ್ವಿತ ಅಧ್ಯಯನಶೀಲ ಕೃತಿ ರಚನಾಕಾರರು ಆಶೀರ್ವಾದಪೂರ್ವಕವಾಗಿ ನೀಡಿದ ಕೃತಿಗಳು, ವಿವಿಧ ಕಾರ್ಯಕ್ರಮಗಳಲ್ಲಿ ಸ್ಮರಣಿಕೆಯಾಗಿ ಪಡೆದ ಗ್ರಂಥಗಳು ಹಾಗೂ ಪ್ರೀತಿಯಿಂದ ಖರೀದಿಸಿದ 52 ಅಮೂಲ್ಯ ಕೃತಿಗಳು ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು. ಮನೆಯ ‘ತಥಾಸ್ತು’ ಗ್ರಂಥಾಲಯದಲ್ಲಿ ಅಕ್ಷಯ ನಿಧಿಯಂತೆ ಸಂಗ್ರಹವಾಗಿವೆ.
ಇವುಗಳಲ್ಲಿ ಅಡಗಿರುವ ಮೌಲ್ಯಾತ್ಮಕ ಸಂದೇಶಗಳು, ಅದ್ವೈತದ ಆದರ್ಶಗಳು ಹಾಗೂ ನಿಜದ ನಡೆಯ ಪಾಠಗಳು ನಮ್ಮ ಬದುಕನ್ನು ಸದಾ ಮುನ್ನಡೆಸಲಿ.
ಜ್ಞಾನ ಬೆಳಗಲಿ…
ಸತ್ಯ ಉಳಿಯಲಿ…
ಮಾನವೀಯತೆ ಗೆಲ್ಲಲಿ…
ಗುರುದೇವರ ಸಂದೇಶ ಎಲ್ಲೆಡೆ ಪಸರಿಸಲಿ… 🌺
🙏 ತಸ್ಮೈ ಶ್ರೀ ನಾರಾಯಣ ಗುರುಭ್ಯೋ ನಮಃ 🙏
BYVNEWS
ಸತ್ಯ • ಧರ್ಮ • ನ್ಯಾಯ • ಸಮಾಜದ ಧ್ವನಿ
