BYV NEWS – ಹೊಸ ಹೆಜ್ಜೆ, ಹೊಸ ಬೆಳಕು
ಭಗವಾನ್ ಶ್ರೀ ನಾರಾಯಣ ಗುರುಗಳ ಪವಿತ್ರ ಜನ್ಮದಿನದ ಶುಭ ಸಂದರ್ಭದಲ್ಲಿ
ಸಿಂಹಮಾಸದ ಶತಭಿಷಾ ನಕ್ಷತ್ರದ ಪವಿತ್ರ ದಿನವಾದ 28-08-2026ರಂದು, ಸಮಾಜದ ಒಗ್ಗಟ್ಟು ಹಾಗೂ ಸರ್ವ ಮನುಕುಲದ ಹಿತವನ್ನು ತನ್ನ ಧ್ಯೇಯವಾಗಿಸಿಕೊಂಡಿರುವ BYV NEWS Portal Website ಲೋಕಾರ್ಪಣೆಗೊಂಡಿದೆ.

🌏 ಭಗವಾನ್ ಶ್ರೀ ನಾರಾಯಣ ಗುರುಗಳ ತತ್ವ, ಧರ್ಮ, ಸಿದ್ಧಾಂತ ಮತ್ತು ಸತ್ಯದ ಹಾದಿಯಲ್ಲಿ
ಸಮಾಜದ ಒಳಿತಿಗಾಗಿ, ಮಾನವೀಯ ಮೌಲ್ಯಗಳ ಉಳಿವಿಗಾಗಿ ಹಾಗೂ ಸರ್ವ ಮಾನವ ಧರ್ಮದ ಶ್ರೇಯಸ್ಸಿಗಾಗಿ BYV NEWS ತನ್ನ ಕಾಯಕವನ್ನು ಮುಂದುವರಿಸಲಿದೆ.
“ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು – ಮನುಷ್ಯನಿಗೆ” ಎಂಬ ಗುರು ಸಂದೇಶದ ಬೆಳಕಿನಲ್ಲಿ,
ಸತ್ಯ • ಧರ್ಮ • ನ್ಯಾಯ • ಮಾನವೀಯತೆ • ಒಗ್ಗಟ್ಟು
ಇವುಗಳೊಂದಿಗೆ ಜನಮನಕ್ಕೆ ನೈಜ ವಿಚಾರ ಮತ್ತು ಸಕಾರಾತ್ಮಕ ಚಿಂತನೆಗಳನ್ನು ತಲುಪಿಸುವುದು ನಮ್ಮ ಸಂಕಲ್ಪ.
✨ BYV NEWS — ಸುದ್ದಿಗಿಂತ ಮಿಗಿಲಾಗಿ, ಸಮಾಜದ ಒಳಿತಿಗಾಗಿ ಒಂದು ನವಚಿಂತನೆಯ ವೇದಿಕೆ. ✨
🌺 ಸರ್ವ ಮಾನವ ಧರ್ಮದ ಮಹಾನ್ ದಾರಿದೀಪ ಭಗವಾನ್ ಶ್ರೀ ನಾರಾಯಣ ಗುರುಗಳ ಜಯಂತಿಯ ಹಾರ್ದಿಕ ಶುಭಾಶಯಗಳು.
🙏 ಗುರುಗಳ ಕೃಪೆ, ಆಶೀರ್ವಾದ ಸರ್ವರ ಮೇಲಿರಲಿ.
🙏 ಸರ್ವರಿಗೂ ಒಳಿತಾಗಲಿ…
🙏 ಸರ್ವರ ಬದುಕು ಶಾಂತಿ, ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರಲಿ.
– BYV NEWS
