ಬಿಲ್ಲವ ಯುವಕರಿಗೆ ಒಂದು ಕಿವಿಮಾತು…! 🌺

🌺 ಬಿಲ್ಲವ ಯುವಕರಿಗೆ ಒಂದು ಕಿವಿಮಾತು…! 🌺

“ನಮಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ…” ಎಂದು ಹೇಳುವ ಮೊದಲು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ…!

ನಮ್ಮ ಸಮುದಾಯದ ಹೆಣ್ಣುಮಕ್ಕಳು ಇಂದು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ, ಉತ್ತಮ ಉದ್ಯೋಗದತ್ತ ಸಾಗುತ್ತಿದ್ದಾರೆ.
ಹಾಗಾದರೆ ನೀವು…?
👉 ನೀವು ಉನ್ನತ ಶಿಕ್ಷಣ ಪಡೆದಿದ್ದೀರಾ?
👉 ಉತ್ತಮ ಉದ್ಯೋಗ ಅಥವಾ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದೀರಾ?

ಅವರು ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ, ಉದ್ಯೋಗ, ವ್ಯಕ್ತಿತ್ವ ಮತ್ತು ಸ್ವಾಭಿಮಾನಕ್ಕೆ ಮಹತ್ವ ನೀಡುವುದು ಸಹಜ.

ಆದ್ದರಿಂದ ಯುವಕರೇ…
📚 ಉನ್ನತ ಶಿಕ್ಷಣದ ಕಡೆಗೆ ಹೆಚ್ಚು ಗಮನ ಕೊಡಿ.
💼 ಉತ್ತಮ ಉದ್ಯೋಗದ ಗುರಿ ಇಟ್ಟುಕೊಳ್ಳಿ.
💪 ಸ್ವಾವಲಂಬಿಗಳಾಗಿ.
❤️ ಸ್ವಾಭಿಮಾನದಿಂದ ಬದುಕಲು ಕಲಿಯಿರಿ.

ಯಾರದ್ದೋ ರಾಜಕೀಯ ಲಾಭಕ್ಕಾಗಿ ಬಕೆಟ್ ಹಿಡಿದುಕೊಂಡು ನಿಮ್ಮ ಅಮೂಲ್ಯವಾದ ಯುವ ಬದುಕನ್ನು ಹಾಳು ಮಾಡಿಕೊಳ್ಳಬೇಡಿ.

ಭಗವಾನ್ ಶ್ರೀ ನಾರಾಯಣ ಗುರುಗಳ “ಶಿಕ್ಷಣ, ಸಂಘಟನೆ, ಸ್ವಾಭಿಮಾನ”ದ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ.

ಇಂದು ನೀವು ನಿಮ್ಮನ್ನು ಬೆಳೆಸಿಕೊಂಡರೆ,
ನಾಳೆ ನಿಮ್ಮ ಬದುಕು ನಿಮ್ಮನ್ನೇ ಗೌರವಿಸುತ್ತದೆ…! ❤️

🌺 ಉನ್ನತ ಶಿಕ್ಷಣ → ಉತ್ತಮ ಉದ್ಯೋಗ → ಸ್ವಾಭಿಮಾನಿ ಜೀವನ → ಉತ್ತಮ ಭವಿಷ್ಯ 🌺

ಇದು ಕೇವಲ ಕಿವಿಮಾತಲ್ಲ… ನಿಮ್ಮ ಭವಿಷ್ಯದ ಬಗ್ಗೆ ಒಂದು ಕಾಳಜಿ. 🙏

— BYVNEWS ಸತ್ಯ • ಧರ್ಮ • ನ್ಯಾಯ

Leave a Reply

Your email address will not be published. Required fields are marked *