ಕುದ್ರೋಳಿ ಮಂಗಳೂರು ದಸರಾ: ದರ್ಬಾರ್ ಮಂಟಪ ರಚನೆಗೆ ಮುಹೂರ್ತ

🟡 BYVNEWS ವಿಶೇಷ ವರದಿ

ಕುದ್ರೋಳಿ ಮಂಗಳೂರು ದಸರಾ: ದರ್ಬಾರ್ ಮಂಟಪ ರಚನೆಗೆ ಮುಹೂರ್ತ

ಮಂಗಳೂರು: ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರು ಪ್ರತಿಷ್ಠಾಪನೆಗೊಳ್ಳಲಿರುವ ದರ್ಬಾರ್ ಮಂಟಪ ರಚನೆಗೆ ವೈದಿಕ ವಿಧಿವಿಧಾನಗಳೊಂದಿಗೆ ಮುಹೂರ್ತ ನೆರವೇರಿತು.

ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ಮಂಗಳೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ದರ್ಬಾರ್ ಮಂಟಪ ನಿರ್ಮಾಣ ಕಾರ್ಯಕ್ಕೆ ಇಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ದೊರೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿ ಕಿಶೋರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ, ಸದಸ್ಯರಾದ ರಾಧಾಕೃಷ್ಣ ಉರ್ವ, ಪಿ.ಕೆ. ಗೌರವಿ ರಾಜಶೇಖರ್, ಲತೀಶ್ ಸುವರ್ಣ, ಉದ್ಯಮಿ ಪ್ರವೀಣ್ ಕುಮಾರ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಕೋಶಾಧಿಕಾರಿ ಯೋಗೀಶ್ ಕೊಟ್ಯಾನ್, ಮೂಲ್ಕಿ ಸುವರ್ಣ ಆಟ್ಸ್‌ನ ಚಂದ್ರಶೇಖರ್ ಸುವರ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಭಕ್ತಿ, ಸಂಭ್ರಮ ಮತ್ತು ವೈಭವದ ಮಂಗಳೂರು ದಸರಾಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

BYVNEWS | Voice of Society • Truthful News • Genuine Reporting

#BYVNEWS #MangaloreDasara2026 #Kudroli #GokarnanathKshetra #MangaloreDasara #Mangalore #Dasara2026 #KudroliDasara #Navadurga #SharadaDevi #BYVNewsKannada

Leave a Reply

Your email address will not be published. Required fields are marked *