🌞 “ಗರಡಿಯ ಗಣಪರು” 🌙

🌞 “ಗರಡಿಯ ಗಣಪರು” 🌙

ತಂದೆ ಕಾಂತನಂತೆ,
ತಾಯಿ ಪಾರ್ವತೀ ದೇವಿಯಂತೆ ನಿನಗೆ ಗಣಪ…..
ತಂದೆ ಕಾಂತಣ, ತಾಯಿ ದೇಯೀ ಬೈದೆತಿ ಬೈದ್ಯರಾದ ನಮಗೆ ಬೆನಕ…..

ನಿನ್ನ ತಂದೆ–ತಾಯಿಯರಿಗೆ ನೀವಿಬ್ಬರು ಕುಮಾರರಂತೆ ಗಣಪ…..
ನಮ್ಮ ತಂದೆ–ತಾಯಿಯರಿಗೂ ನಾವಿಬ್ಬರು ಕುಮಾರರು ಬೆನಕ…..

ತಂದೆಯಿದ್ದರೂ ನೀನು ಭಾಮಾ ಕುಮಾರನಂತೆ ಗಣಪ…..
ತಂದೆಯಿದ್ದರೂ ನಾವೂ ಭಾಮಾ ಕುಮಾರರೇ ಬೆನಕ…..

ಓಂಕಾರ ಸ್ವರೂಪ ನಿನ್ನದಂತೆ ಗಣಪ…..
ಓಂಕಾರ ಸ್ವರೂಪವೇ ನಮ್ಮ ಬ್ರಹ್ಮಗುಂಡ ಬೆನಕ…..

ಆಕಾಶ ನಿನ್ನ ಮನೆಯಂತೆ ಗಣಪ…..
ಕಂಚಿಲ್ ನಮ್ಮ ಮನೆಯೋ ಬೆನಕ…..

ಗುರುಗಣಾಧಿಪತಿ ನೀನಂತೆ ಗಣಪ…..
ಗುರೂರ್ಗರೀಯಾ ನಾವು ಬೆನಕ…..

ನಿಮಗಿಬ್ಬರಿಗೂ ಮದುವೆಯಾಗಲಿಲ್ಲವಂತೆ ಗಣಪ…..
ನಾವಿಬ್ಬರೂ ಬ್ರಹ್ಮಚಾರಿಗಳು ಬೆನಕ…..

ಎಂಟೂರ ಒಡೆಯ, ಅಷ್ಟವಿನಾಯಕನಾಗಿ ಮೆರೆಯುತಿಹೆ ನೀನು ಗಣಪ…..
ಎಣ್ಮೂರಿನ ಒಡೆಯರಾಗಿ ಮೆರೆಯುತಿಹ ಬೆರ್ಮೆರ್ ಬೈದೇರುಗಳು ನಾವು ಬೆನಕ…..

ಗಣಪತಿಯೂ ನೀನೆ, ಮಹಾಗಣಪತಿಯೂ ನೀನಂತೆ ಗಣಪ…..
ಬೈದೇರುಗಳೂ ನಾವೇ, ಬೆರ್ಮೆರ್ ಬೈದೇರುಗಳೂ ನಾವೇ ಬೆನಕ…..

ಗಾಳಿದೇವರ ಆರಾಧನೆಯಿಂದಾಗಿಯೇ ನೀನು ವಕ್ರತುಂಡ ಗಣಪ…..
ಗಾಳಿದೇವರ ಆರಾಧನೆಯಿಂದಾಗಿಯೇ ನಾವು ಬೈದ್ಯರು ಬೆನಕ…..

ಛಾಮರ ಕರ್ಣನಾಗಿ ನಿರಂತರ ಗಾಳಿದೇವರ ಆಯಾಮ ಮಾಡುವಾತ ನೀನು ಗಣಪ…..
ಪುಚ್ಛಲಧಾರಿಗಳಾಗಿ ನಿರಂತರ ಗಾಳಿದೇವರ ಆಯಾಮ ಮಾಡುವವರು ನಾವು ಬೆನಕ…..

ಮೂರ್ತಿಯಾಗಿ ಆರಾಧನೆ ಪಡೆದರೂ ಕೊನೆಯ ನೆಲೆಯು ಜಲವೇ ನಿನಗೆ ಗಣಪ…..
ಜಲನೋಡಿ ನೆಲೆಯಾದ ಬೆರ್ಮೆರ್ ಬೈದೇರುಗಳು ನಾವು ಬೆನಕ…..

ನಿನ್ನ ನೈವೇದ್ಯಕ್ಕೆ ಅಚ್ಚುಬೆಲ್ಲ ಮೆಚ್ಚಂತೆ ನಿನಗೆ ಗಣಪ…..
ನಮ್ಮ ನೈವೇದ್ಯಕ್ಕೂ ಅಚ್ಚುಬೆಲ್ಲ ಬೇಕೇ ಬೇಕು ಬೆನಕ…..

🙏 ಅರಿಯದವರಿಗೆ — ನೀವ್ಯಾರೋ? ನಾವ್ಯಾರೋ?
🙏 ಅರಿತವರಿಗೆ — ನಾವೇ ನೀವು, ನೀವೇ ನಾವು.

✨ “ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕರು” ✨

🌺 ಇದೇ “ಗರಡಿಯ ಗಣಪರ ಹಬ್ಬ” 🌺

🙏🙏🙏

ಈಶಾವಾಸ್ಯಂ

ಬರಹ ಕೃಪೆ: WhatsApp

Leave a Reply

Your email address will not be published. Required fields are marked *