ಕೇರಳದ ಅಬಕಾರಿ ಮತ್ತು ಸಹಕಾರ ಸಚಿವ ಅಡ್ವೊಕೇಟ್ ಎಂ. ಲಿಜು ಕುಟುಂಬ ಸಮೇತ ಕುದ್ರೋಳಿ ಕ್ಷೇತ್ರಕ್ಕೆ ಭೇಟಿ

ಕೇರಳದ ಅಬಕಾರಿ ಮತ್ತು ಸಹಕಾರ ಸಚಿವ ಅಡ್ವೊಕೇಟ್ ಎಂ. ಲಿಜು ಕುಟುಂಬ ಸಮೇತ ಕುದ್ರೋಳಿ ಕ್ಷೇತ್ರಕ್ಕೆ ಭೇಟಿ
ಮಂಗಳೂರು | BYVNEWS
ಕೇರಳ ರಾಜ್ಯದ ಅಬಕಾರಿ ಮತ್ತು ಸಹಕಾರ ಸಚಿವರಾದ ಅಡ್ವೊಕೇಟ್ ಎಂ. ಲಿಜು ಅವರು ಇಂದು (ಅಕ್ಟೋಬರ್ 23) ಕುಟುಂಬ ಸಮೇತ ಮಂಗಳೂರಿನ ಐತಿಹಾಸಿಕ ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿಗೆ ಭೇಟಿ ನೀಡಿ, ಶ್ರೀ ಗೋಕರ್ಣನಾಥ ಸ್ವಾಮಿ ಹಾಗೂ ಭಗವಾನ್ ಶ್ರೀ ನಾರಾಯಣ ಗುರುದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಜೈರಾಜ್ ಹೆಚ್. ಸೋಮಸುಂದರಂ ಹಾಗೂ ಕ್ಷೇತ್ರದ ಖಜಾಂಚಿಯಾದ ಶ್ರೀ ಪದ್ಮರಾಜ್ ಆರ್. ಪೂಜಾರಿ ಅವರು ಸಚಿವರನ್ನು ಆತ್ಮೀಯವಾಗಿ ಹಾಗೂ ಗೌರವಪೂರ್ವಕವಾಗಿ ಸ್ವಾಗತಿಸಿದರು.

ಕ್ಷೇತ್ರದ ಧಾರ್ಮಿಕ ಮಹತ್ವ ಹಾಗೂ ಗುರುದೇವರ ಆಶೀರ್ವಾದದ ಹಿನ್ನೆಲೆಯಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ರಾಧಾಕೃಷ್ಣ ಉರ್ವ, ಶಶಿಧರ್ ಹೆಗ್ಡೆ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

BYVNEWS
Voice of Society • Truthful News • Genuine Reporting

