ಗುರು ಪ್ರಾರ್ಥನೆಯೊಂದಿಗೆ ಆರಂಭ… ಗುರುದೇವರಿಗೆ ವಿಶೇಷ ಪೂಜೆಯೊಂದಿಗೆ ಸಮರ್ಪಣೆ!
🙏 ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ 🙏
🌺 ನವರಾತ್ರಿ ಮಹೋತ್ಸವ – ವಿಶ್ವವಿಖ್ಯಾತ ಮಂಗಳೂರು ದಸರಾ – 2026 🌺
ಗುರು ಪ್ರಾರ್ಥನೆಯೊಂದಿಗೆ ಆರಂಭ… ಗುರುದೇವರಿಗೆ ವಿಶೇಷ ಪೂಜೆಯೊಂದಿಗೆ ಸಮರ್ಪಣೆ!
ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿಯಲ್ಲಿ ನವರಾತ್ರಿ ಮಹೋತ್ಸವವು ಭಗವಾನ್ ಶ್ರೀ ನಾರಾಯಣ ಗುರುದೇವರ ಪ್ರಾರ್ಥನೆಯೊಂದಿಗೆ ಆರಂಭವಾಗಿ, ಮಹೋತ್ಸವದ ಅಂತಿಮ ಹಂತದಲ್ಲಿ ವಿಶ್ವಗುರು ಭಗವಾನ್ ಶ್ರೀ ನಾರಾಯಣ ಗುರುದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಗುರುದೇವರಿಗೆ ಕೃತಜ್ಞತೆ ಅರ್ಪಿಸುವುದು ಕ್ಷೇತ್ರದ ಸಂಪ್ರದಾಯವೆಂದು ಭಕ್ತಿಭಾವದಿಂದ ಸ್ಮರಿಸಲಾಗುತ್ತದೆ.
ಶ್ರೀ ನಾರಾಯಣ ಗುರುದೇವರ ಕೃಪೆ, ಆಶೀರ್ವಾದ ಹಾಗೂ ಆದರ್ಶಗಳೇ ಕ್ಷೇತ್ರದ ಆಧ್ಯಾತ್ಮಿಕ ಪ್ರೇರಣೆ. ಜಾತಿ, ಮತ, ಧರ್ಮಗಳ ಎಲ್ಲೆಗಳನ್ನು ಮೀರಿ ಮಾನವೀಯತೆ, ಸಮಾನತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರಿದ ಮಹಾಗುರುವಿನ ತತ್ವಗಳು ಮಂಗಳೂರು ದಸರೆಯ ಆತ್ಮದಲ್ಲಿ ಸದಾ ಜೀವಂತವಾಗಿವೆ.
ಶ್ರೀ ಗೋಕರ್ಣನಾಥ ಕ್ಷೇತ್ರದ ಆಧ್ಯಾತ್ಮಿಕ ಚೈತನ್ಯದ ಮೂಲ ಪ್ರೇರಣೆಯೇ ಭಗವಾನ್ ಶ್ರೀ ನಾರಾಯಣ ಗುರುದೇವರು…!!! 🙏🌺
ವಿಶ್ವಗುರು ಭಗವಾನ್ ಶ್ರೀ ನಾರಾಯಣ ಗುರುದೇವರಿಗೆ ಭಕ್ತಿಪೂರ್ವಕ ಪ್ರಣಾಮಗಳು.
BYV NEWS Voice of Society • Truthful News • Genuine Reporting
