🌺 ಸಮಸ್ತ ನಾಮಧಾರಿ ಸಮಾಜಕ್ಕೆ ಹೆಮ್ಮೆಯ ಕ್ಷಣ…! 🌺

🌺 ಸಮಸ್ತ ನಾಮಧಾರಿ ಸಮಾಜಕ್ಕೆ ಹೆಮ್ಮೆಯ ಕ್ಷಣ…! 🌺
ಕುಮಟಾದ ಶ್ರೀಮತಿ ಮಮತಾ ನಾಯ್ಕ್ ಅವರು ಅಭಿನಾಷಿಣಿಯ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾಗಿ ಸಲ್ಲಿಸುತ್ತಿರುವ ಸೇವೆ ಮತ್ತು ಸಾಧನೆ ನಿಜಕ್ಕೂ ಅಭಿನಂದನಾರ್ಹ.
ಸತತ ಆರು ವರ್ಷಗಳಿಂದ ಶೇ.100ರಷ್ಟು ಫಲಿತಾಂಶ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಇವರ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ “ಅತ್ಯುತ್ತಮ ಶಿಕ್ಷಕಿ” ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿ. 👏🌹
ಮಮತಾ ನಾಯ್ಕ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರ ಸೇವೆ ಸಮಾಜದ ಎಲ್ಲರಿಗೂ ಸೇರಿದ್ದು. ಆದರೆ ಅವರು ನಮ್ಮ ನಾಮಧಾರಿ ಸಮಾಜದಲ್ಲಿ ಜನಿಸಿರುವುದು ನಮ್ಮ ಹೆಮ್ಮೆ.
ನಾಮಧಾರಿ ಸಮಾಜದ ಮಗಳಾಗಿ ಅವರಿಗೆ ದೊರೆತ ಈ ಗೌರವ, ಸಮಸ್ತ ನಾಮಧಾರಿ ಸಮಾಜಕ್ಕೆ ದೊರೆತ ಗೌರವವಾಗಿದೆ. ❤️
ಈ ವಿಶೇಷ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತು ಪ್ರೋತ್ಸಾಹಿಸಿದ ಆರ್ಯ ಈಡಿಗ ನೌಕರರ ಸಂಘ ಬೆಂಗಳೂರು, ಕುಮಟಾ ನೌಕರರ ಸಂಘ, ಭಟ್ಕಳ ನೌಕರರ ಸಂಘದ ಅಧ್ಯಕ್ಷರಾದ ಮೋಹನ್ ನಾಯ್ಕ್, ಶಿವಾನಂದ ನಾಯ್ಕ್, ಕೆ.ಬಿ. ಈಶ್ವರ್ ನಾಯ್ಕ್, ಹೊನ್ನಾವರದ ಖ್ಯಾತ ವಕೀಲರಾದ ವಿಕ್ರಂ ನಾಯ್ಕ್, ಕುಮಟಾದ ಜನಪ್ರಿಯ ನಾಯಕ ಸೂರಜ್ ನಾಯ್ಕ್ ಸೋನಿ ಹಾಗೂ ರಾಮ ನಾಯ್ಕ್, ಕುಮಟಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏🙏
🌿 ಮಮತಾ ನಾಯ್ಕ್ ಅವರೇ… ನಿಮ್ಮ ಜೊತೆ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಸದಾ ಇರಲಿ.
ನಿಮ್ಮ ಸೇವೆ ಇನ್ನಷ್ಟು ಮಕ್ಕಳ ಬದುಕಿಗೆ ಬೆಳಕಾಗಲಿ.
ನಿಮ್ಮ ಸಾಧನೆ ನಮ್ಮ ಸಮಾಜದ ಯುವ ಪೀಳಿಗೆಗೆ ಪ್ರೇರಣೆಯಾಗಲಿ. 🌹
ಅಭಿನಂದನೆಗಳು ಮಮತಾ ನಾಯ್ಕ್ ಅವರೇ! 💐
BYVNEWS
ಸತ್ಯ • ಧರ್ಮ • ನ್ಯಾಯ • ಮಾನವೀಯತೆ
#ಮಮತಾ_ನಾಯ್ಕ್ #ಅತ್ಯುತ್ತಮ_ಶಿಕ್ಷಕಿ #ರಾಜ್ಯೋತ್ಸವ_ಪ್ರಶಸ್ತಿ #ನಾಮಧಾರಿ_ಸಮಾಜ #ಶಿಕ್ಷಣ #ಸಾಧನೆ #ಅಭಿನಂದನೆಗಳು #BYVNEWS #ಶ್ರೀನಾರಾಯಣಗುರು
