🇮🇳 ಶ್ರಮವೇ ನಮ್ಮ ಶಕ್ತಿ… ಶಿಕ್ಷಣವೇ ನಮ್ಮ ದಾರಿ… ಸ್ವಾಭಿಮಾನವೇ ನಮ್ಮ ಹೆಮ್ಮೆ! ❤️
🇮🇳 ಶ್ರಮವೇ ನಮ್ಮ ಶಕ್ತಿ… ಶಿಕ್ಷಣವೇ ನಮ್ಮ ದಾರಿ… ಸ್ವಾಭಿಮಾನವೇ ನಮ್ಮ ಹೆಮ್ಮೆ! ❤️
ಜೀವನದಲ್ಲಿ ಯಾರನ್ನೂ ಅವಲಂಬಿಸದೆ, ನಮ್ಮ ಸ್ವಂತ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸರಿಯಾದ ಶಿಕ್ಷಣದ ಮೂಲಕ ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳೋಣ.
ಯಶಸ್ಸು ಒಂದು ದಿನದಲ್ಲಿ ಸಿಗುವುದಿಲ್ಲ.
ಕಷ್ಟಗಳು ಬರುತ್ತವೆ… ನಷ್ಟಗಳು ಎದುರಾಗಬಹುದು… ತಡವಾಗಬಹುದು… ಆದರೆ ನಮ್ಮ ಪ್ರಯತ್ನವನ್ನು ಎಂದಿಗೂ ನಿಲ್ಲಿಸಬಾರದು.
ತಾಳ್ಮೆಯಿಂದ ಮುನ್ನಡೆಯಿರಿ.
ಇಂದು ಮಾಡುವ ಪರಿಶ್ರಮವೇ ನಾಳೆಯ ಯಶಸ್ಸಿಗೆ ಬುನಾದಿ.
Hard Work never goes waste — ಪರಿಶ್ರಮಕ್ಕೆ ಖಂಡಿತ ಫಲ ಸಿಗುತ್ತದೆ.
ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ…
ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಲಿ…
ಸ್ವಾವಲಂಬಿಗಳಾಗಿ ಬೆಳೆಯಲಿ…
ಈ ದೇಶದ ಜವಾಬ್ದಾರಿಯುತ, ಪ್ರಾಮಾಣಿಕ ಮತ್ತು ಹೆಮ್ಮೆಯ ನಾಗರಿಕರಾಗಲಿ. 🇮🇳
ನಾವು ಯಾರಿಗಿಂತಲೂ ಕಡಿಮೆಯಲ್ಲ.
ನಮ್ಮ ಸಾಮರ್ಥ್ಯವನ್ನು ಅರಿತು, ಜ್ಞಾನವನ್ನು ಪಡೆದು, ಪರಿಶ್ರಮದ ದಾರಿಯಲ್ಲಿ ಮುನ್ನಡೆಯೋಣ.
ಬಿಲ್ಲವರಾಗಿ ಹುಟ್ಟಿರುವುದು ಹೆಮ್ಮೆ…
ಬಿಲ್ಲವರಾಗಿ ಸಾಧಿಸುವುದು ನಮ್ಮ ಜವಾಬ್ದಾರಿ…
ಸಮಾಜಕ್ಕೆ ಮತ್ತು ದೇಶಕ್ಕೆ ಕೊಡುಗೆ ನೀಡುವುದು ನಮ್ಮ ಕರ್ತವ್ಯ! ❤️
🌿 ಶಿಕ್ಷಣ • ಪರಿಶ್ರಮ • ತಾಳ್ಮೆ • ಸ್ವಾಭಿಮಾನ • ಒಗ್ಗಟ್ಟು
ಹೆಮ್ಮೆಯಿಂದ ಹೇಳೋಣ — ನಾವು ಬಿಲ್ಲವರು!
🇮🇳 ಜೈ ಹಿಂದ್ 🇮🇳
✍️ ಬರಹ : ಹರಿಶ್ಚಂದ್ರ ಪೂಜಾರಿ
— BYVNEWS

