🙏🌺 ವಿಶ್ವವಿಖ್ಯಾತ ಮಂಗಳೂರು ಮಹಾದಸರಾ – ಭವ್ಯ ಶೋಭಾಯಾತ್ರೆ ಇಂದು! 🌺🙏

ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ 🙏🌺

🙏🌺 ವಿಶ್ವವಿಖ್ಯಾತ ಮಂಗಳೂರು ಮಹಾದಸರಾ – ಭವ್ಯ ಶೋಭಾಯಾತ್ರೆ ಇಂದು! 🌺🙏

ಇಂದು ಸಂಜೆ 4 ಗಂಟೆಗೆ ಭವ್ಯ ಶೋಭಾಯಾತ್ರೆ ಪ್ರಾರಂಭ!

ಭಗವಾನ್ ಶ್ರೀ ನಾರಾಯಣ ಗುರುದೇವರ ಪರಮ ಪವಿತ್ರ ಪುಣ್ಯಕ್ಷೇತ್ರವಾದ ಮಂಗಳೂರಿನ ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿಯಿಂದ ವಿಶ್ವವಿಖ್ಯಾತ ಮಂಗಳೂರು ಮಹಾದಸರಾ ಮಹೋತ್ಸವದ ಭವ್ಯ ಶೋಭಾಯಾತ್ರೆ ಇಂದು ವಿಜೃಂಭಣೆಯಿಂದ ಆರಂಭವಾಗಲಿದೆ. 🪷🙏

🌺 ನಾಡಿನ ಸಾಂಸ್ಕೃತಿಕ ವೈಭವ, ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಪರಂಪರೆಯ ಪ್ರತೀಕವಾದ ಈ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳೋಣ.

🙏 ಬನ್ನಿ, ಎಲ್ಲರೂ ಸೇರಿ ಭಗವಾನ್ ಶ್ರೀ ನಾರಾಯಣ ಗುರುದೇವರ ಹಾಗೂ ಮಹಾತಾಯಿಯ ದಿವ್ಯ ಆಶೀರ್ವಾದವನ್ನು ಪಡೆಯೋಣ. ಗುರುದೇವರ ಕೃಪೆಯಿಂದ ನಮ್ಮೆಲ್ಲರ ಬದುಕು ಪಾವನವಾಗಲಿ, ನಮ್ಮ ಜನ್ಮ ಸಾರ್ಥಕವಾಗಲಿ.

💐 ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಸನ್ಮಂಗಳವನ್ನು ಗುರುದೇವರು ಕರುಣಿಸಲಿ.

ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ 🙏🌺

BYV NEWS Voice of Society • Truthful News • Genuine Reporting

Leave a Reply

Your email address will not be published. Required fields are marked *