ಸಾಮಾಜಿಕ ಬದಲಾವಣೆಯತ್ತ ಮಹತ್ವದ ಹೆಜ್ಜೆ

ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಹರಗಿ ಗ್ರಾಮದ ದೀವರು ಸಮುದಾಯದ ಹೊಸ ನಿರ್ಧಾರಕ್ಕೆ ಭಾರೀ ಮೆಚ್ಚುಗೆ..! 👌💪🤝

🟠 BYVNEWS | ಸಾಮಾಜಿಕ ಬದಲಾವಣೆಯತ್ತ ಮಹತ್ವದ ಹೆಜ್ಜೆ

ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಹರಗಿ ಗ್ರಾಮದ ದೀವರು ಸಮುದಾಯದ ಹೊಸ ನಿರ್ಧಾರಕ್ಕೆ ಭಾರೀ ಮೆಚ್ಚುಗೆ..! 👌💪🤝

ಮದುವೆ ಸಮಾರಂಭಗಳಲ್ಲಿ ನಡೆಯುವ ಅತಿಯಾದ ಖರ್ಚಿನ ಬೀಗರ ಊಟ ಪದ್ಧತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹರಗಿ ಗ್ರಾಮದ ದೀವರು ಸಮುದಾಯ ತೆಗೆದುಕೊಂಡಿರುವ ಹೊಸ ನಿರ್ಧಾರ ನಿಜಕ್ಕೂ ಗಮನಾರ್ಹ.

‘ಬೀಗರ’ ಎಂದರೆ ಮದುವೆಯ ನಂತರ ವಧು-ವರರ ಕಡೆಯವರು ಪರಸ್ಪರರನ್ನು ಆಹ್ವಾನಿಸಿ ನೀಡುವ ವಿಶೇಷ ಭೋಜನ ಕೂಟ.

ಇಂತಹ ಸಾಮಾಜಿಕ ಬದಲಾವಣೆಯ ನಿರ್ಧಾರಗಳು ಬಿಲ್ಲವ, ನಾಮಧಾರಿ, ಈಡಿಗ ಸೇರಿದಂತೆ ನಮ್ಮ 26 ಪಂಗಡಗಳಲ್ಲಿಯೂ ಜಾರಿಗೆ ಬರಬೇಕಾಗಿದೆ.

ಮದುವೆಯ ಹೆಸರಿನಲ್ಲಿ ಸಾಲ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಕ್ಕಿಂತ, ಸರಳತೆ, ಉಳಿತಾಯ, ಶಿಕ್ಷಣ, ಉದ್ಯೋಗ ಮತ್ತು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಆದ್ಯತೆ ನೀಡುವ ಕಾಲ ಬಂದಿದೆ.

ಸಮಾಜದ ಒಳಿತಿಗಾಗಿ ಅನಗತ್ಯ ಆಚರಣೆಗಳಿಗೆ ಕಡಿವಾಣ ಹಾಕುವ ಧೈರ್ಯವೇ ನಿಜವಾದ ಸಾಮಾಜಿಕ ಸುಧಾರಣೆಯ ಹೆಜ್ಜೆ.

👉 ಹರಗಿ ಗ್ರಾಮದ ದೀವರು ಸಮುದಾಯದ ಈ ನಿರ್ಧಾರಕ್ಕೆ BYVNEWS ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. 👏👏

“ಬದಲಾವಣೆ ಬೇಕು ಎಂದರೆ ಮೊದಲು ನಮ್ಮಿಂದಲೇ ಆರಂಭವಾಗಬೇಕು.”

#BYVNEWS #SocialChange #ದೀವರು #ಬಿಲ್ಲವ #ನಾಮಧಾರಿ #ಈಡಿಗ #26ಪಂಗಡ #ಸಾಮಾಜಿಕಬದಲಾವಣೆ #ಸಾಮಾಜಿಕಜಾಗೃತಿ #ಸರಳಮದುವೆ

Leave a Reply

Your email address will not be published. Required fields are marked *