ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಯಶ್ವಂತ್ ಆರ್. ನಾಯ್ಕ್

🏆 ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಯಶ್ವಂತ್ ಆರ್. ನಾಯ್ಕ್ 💐
ಭಟ್ಕಳ: ಹೆಬಳೆ ಬಬ್ಬನಕಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಯಶ್ವಂತ್ ಆರ್. ನಾಯ್ಕ್ ಅವರಿಗೆ ಅವರ ಶೈಕ್ಷಣಿಕ ಸೇವೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಕ್ಷಕ ಎಂದರೆ ಕೇವಲ ಪಾಠ ಬೋಧಿಸುವ ವ್ಯಕ್ತಿಯಲ್ಲ…
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿ. ✨
ತಮ್ಮ ಕರ್ತವ್ಯವನ್ನು ಶ್ರದ್ಧೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ನಿರ್ವಹಿಸುತ್ತಿರುವ ಯಶ್ವಂತ್ ಆರ್. ನಾಯ್ಕ್ ಅವರ ಸೇವೆಗೆ ಸಂದ ಈ ಗೌರವವು ಹೆಬಳೆ ಬಬ್ಬನಕಲ್ ಶಾಲೆ ಹಾಗೂ ಭಟ್ಕಳ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿ.
🌹 ಅಭಿನಂದನೆಗಳು ಶ್ರೀ ಯಶ್ವಂತ್ ಆರ್. ನಾಯ್ಕ್ ಅವರೇ.
ನಿಮ್ಮ ಶೈಕ್ಷಣಿಕ ಸೇವೆ ಇನ್ನಷ್ಟು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಲಿ.
BYVNEWS ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು. 🙏💐
#BYVNEWS #TeacherAward #BestTeacher #ಶಿಕ್ಷಕರ_ದಿನಾಚರಣೆ #ಉತ್ತಮ_ಶಿಕ್ಷಕ_ಪ್ರಶಸ್ತಿ #YashwanthRNayak #Bhatkal #Heble #Education #Teacher #ಶಿಕ್ಷಣ #ಅಭಿನಂದನೆಗಳು
