🙏💐 ಸೇವೆಯೇ ಧರ್ಮ… ಸ್ವಚ್ಛತೆಯೇ ಸಂಕಲ್ಪ! 💐🙏

ದಸರಾ ಮಹೋತ್ಸವದ ಬಳಿಕವೂ ನಿಲ್ಲದ ಸೇವಾ ಕೈಂಕರ್ಯ!

🙏💐 ಸೇವೆಯೇ ಧರ್ಮ… ಸ್ವಚ್ಛತೆಯೇ ಸಂಕಲ್ಪ! 💐🙏

📰 BYV NEWS | ಮಂಗಳೂರು

ದಸರಾ ಮಹೋತ್ಸವದ ಬಳಿಕವೂ ನಿಲ್ಲದ ಸೇವಾ ಕೈಂಕರ್ಯ!

ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದ ಸುದೀರ್ಘ ಸೇವೆಯ ಬಳಿಕವೂ ವಿರಮಿಸದೆ, ರವಿವಾರ ಕ್ಷೇತ್ರದ ಪುಷ್ಕರಣಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಶ್ರೀ ಗೋಕರ್ಣನಾಥ ಸೇವಾದಳದ ಸ್ವಯಂಸೇವಕ ಬಂಧುಗಳ ಸೇವೆ ನಿಜಕ್ಕೂ ಶ್ಲಾಘನೀಯ. 🙏

ಧಾರ್ಮಿಕ ಸೇವೆಯ ಜೊತೆಗೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯಲ್ಲಿಯೂ ತೊಡಗಿಸಿಕೊಂಡಿರುವ ಸೇವಾದಳದ ಬಂಧುಗಳು ನಿಸ್ವಾರ್ಥ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದ್ದಾರೆ. ❤️

🌿 ಸ್ವಚ್ಛ ಕ್ಷೇತ್ರ – ಸುಂದರ ಪರಿಸರ – ಸುಸ್ಥಿರ ಸಮಾಜ

ಸಮಾಜದ ಒಳಿತಿಗಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಸ್ವಯಂಸೇವಕ ಬಂಧುಗಳಿಗೂ ಹೃದಯಪೂರ್ವಕ ಅಭಿನಂದನೆಗಳು. 💐

ನಿಸ್ವಾರ್ಥ ಸೇವೆಯೇ ನಿಜವಾದ ಮಾನವೀಯತೆ! 🙏

📰 BYVNEWS
Voice of Society • Truthful News • Genuine Reporting

#BYVNEWS #ಶ್ರೀಗೋಕರ್ಣನಾಥಕ್ಷೇತ್ರ #ಕುದ್ರೋಳಿ #ಸೇವಾದಳ #ನಿಸ್ವಾರ್ಥಸೇವೆ #ಸ್ವಚ್ಛತಾಅಭಿಯಾನ #ಸಮಾಜಸೇವೆ #ಮಂಗಳೂರು

Leave a Reply

Your email address will not be published. Required fields are marked *