ಶ್ರೀ ನಾರಾಯಣಗುರು ಮಹಾಒಕ್ಕೂಟ – ಕರ್ನಾಟಕ (ರಿ.) ಮೊದಲ ಕಾರ್ಯಕಾರಿ ಮಂಡಳಿ ಸಭೆ ಯಶಸ್ವಿ

📰 ಶ್ರೀ ನಾರಾಯಣಗುರು ಮಹಾಒಕ್ಕೂಟ – ಕರ್ನಾಟಕ (ರಿ.) ಮೊದಲ ಕಾರ್ಯಕಾರಿ ಮಂಡಳಿ ಸಭೆ ಯಶಸ್ವಿ
ಬೆಂಗಳೂರು | 08-10-2026
ಶ್ರೀ ನಾರಾಯಣಗುರು ಮಹಾಒಕ್ಕೂಟ – ಕರ್ನಾಟಕ (ರಿ.) ಇದರ ನೋಂದಣಿ ನಂತರದ ಮೊದಲ ಕಾರ್ಯಕಾರಿ ಮಂಡಳಿ ಸಭೆ ಇಂದು ಬೆಂಗಳೂರಿನ ಶೇಷಾದ್ರಿಪುರಂ, ರಾಜೀವ ಗಾಂಧಿ ವೃತ್ತದ ಈಡಿಗ ಭವನದಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷರಾದ ಶ್ರೀ ಜೆ.ಪಿ. ಸುಧಾಕರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಮಪೂಜ್ಯ ಸ್ವಾಮೀಜಿಗಳು, ಗೌರವ ಸಲಹೆಗಾರರಾದ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ಹಾಗೂ ಶ್ರೀ ಜಗದೇವ್ ಗುತ್ತೇದಾರ್, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಒಕ್ಕೂಟದ ಅಧಿಕೃತ ಉದ್ಘಾಟನೆ, ಮುಂದಿನ ಕಾರ್ಯಯೋಜನೆಗಳು, ಸಂಘಟನೆಯ ಚಟುವಟಿಕೆಗಳು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು.

🙏 ಶ್ರೀ ನಾರಾಯಣ ಗುರುಗಳ ಆದರ್ಶ ಮತ್ತು ಸಂದೇಶದೊಂದಿಗೆ ಸಮಾಜದ ಒಗ್ಗಟ್ಟು ಹಾಗೂ ಸಂಘಟನೆಯ ಬಲವರ್ಧನೆಯತ್ತ ಮಹಾಒಕ್ಕೂಟದ ಹೊಸ ಹೆಜ್ಜೆ.
💐 ಶುಭವಾಗಲಿ… ಯಶಸ್ಸು ಸಿಗಲಿ… 💐
BYVNEWS
Voice of Society • Truthful News • Genuine Reporting
#BYVNEWS #NarayanaGuru #SriNarayanaGuruMahaOkkoota #Karnataka #Billava #Eediga #CommunityUnity #SocialUnity #Bengaluru #SreeNarayanaGuru
