IMA ಕರ್ನಾಟಕ ರಾಜ್ಯ ಶಾಖೆಯ ಉಪಾಧ್ಯಕ್ಷರಾಗಿ ಡಾ. ಸದಾನಂದ ಪೂಜಾರಿ ಅವಿರೋಧ ಆಯ್ಕೆ

📰 BYVNEWS | ಅಭಿನಂದನಾ ವಿಶೇಷ
💐 IMA ಕರ್ನಾಟಕ ರಾಜ್ಯ ಶಾಖೆಯ ಉಪಾಧ್ಯಕ್ಷರಾಗಿ ಡಾ. ಸದಾನಂದ ಪೂಜಾರಿ ಅವಿರೋಧ ಆಯ್ಕೆ
ಮಂಗಳೂರಿನ ಹೆಮ್ಮೆಯ ಮೂತ್ರರೋಗ ತಜ್ಞ, ಬಡವರ ಬಂಧು ಡಾ. ಸದಾನಂದ ಪೂಜಾರಿ ಅವರು ಭಾರತೀಯ ವೈದ್ಯಕೀಯ ಸಂಘ (IMA) ಕರ್ನಾಟಕ ರಾಜ್ಯ ಶಾಖೆಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
ಜನಸೇವೆಯೇ ಜನಾರ್ದನ ಸೇವೆ ಎಂಬ ಮನೋಭಾವದಿಂದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಬಡ ಹಾಗೂ ಅಗತ್ಯವಿರುವ ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವ ಡಾ. ಸದಾನಂದ ಪೂಜಾರಿ ಅವರ ಸಾಮಾಜಿಕ ಕಾಳಜಿ ಮತ್ತು ಮಾನವೀಯ ಸೇವೆ ಶ್ಲಾಘನೀಯ.
ಬೆಳ್ತಂಗಡಿಯ ಗ್ರಾಮೀಣ ಭಾಗದಿಂದ ಬಂದ ಅವರು ತಮ್ಮ ಅವಿರತ ಪರಿಶ್ರಮ, ಸೇವಾ ಮನೋಭಾವ ಮತ್ತು ವೃತ್ತಿಪರ ಬದ್ಧತೆಯಿಂದ ಈ ಉನ್ನತ ಸ್ಥಾನಕ್ಕೇರಿರುವುದು ಇಡೀ ಕರಾವಳಿಯ ಹೆಮ್ಮೆ.
💐 ಡಾ. ಸದಾನಂದ ಪೂಜಾರಿ ಅವರಿಗೆ BYVNEWS ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.
🙏 ನಿಮ್ಮ ಸೇವಾ ಪಯಣ ಇನ್ನಷ್ಟು ಎತ್ತರಕ್ಕೇರಲಿ…
✨ ನಿಮ್ಮ ಮಾನವೀಯ ಸೇವೆ ಇನ್ನಷ್ಟು ಉಜ್ವಲವಾಗಲಿ!
BYVNEWS
Voice of Society • Truthful News • Genuine Reporting
#BYVNEWS #DrSadanandaPoojary #IMA #Karnataka #Mangalore #Congratulations #Healthcare #PublicService
