🎓 ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

📰 BYV NEWS | ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ
🎓 ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ಅರ್ಜಿ ಸಲ್ಲಿಸಲು ಅ.25 ಕೊನೆಯ ದಿನ
ಮಂಗಳೂರು: ದಾಮೋದರ ಆರ್. ಸುವರ್ಣ ಅವರ 102ನೇ ಜನ್ಮಜಯಂತಿ ಸ್ಮರಣಾರ್ಥ ಹಾಗೂ ದಾಮೋದರ ಆರ್. ಸುವರ್ಣ ಎಜುಕೇಶನ್ ಟ್ರಸ್ಟ್ ವತಿಯಿಂದ ಬಿಲ್ಲವ ಸಮಾಜದ ಬಡ ಕುಟುಂಬಗಳ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿಯಲ್ಲಿ ಕನಿಷ್ಠ ಶೇ.75 ಅಂಕ ಗಳಿಸಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
📌 ಅರ್ಜಿಗೆ ಅಗತ್ಯ ದಾಖಲೆಗಳು:
• ಪಿಯುಸಿ ಅಂಕಪಟ್ಟಿಯ ಪ್ರತಿ
• ಬಿಪಿಎಲ್ ಕಾರ್ಡ್
• ಸ್ಥಳೀಯ ಬಿಲ್ಲವ ಸಂಘದ ಶಿಫಾರಸು
📅 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 25
ಅರ್ಜಿಗಳನ್ನು ಮಂಗಳೂರಿನ ಉಜ್ಜೋಡಿ ಮಹಾಕಾಳಿ ದೇವಸ್ಥಾನದ ಎದುರು, ಪೆಟ್ರೋಲ್ ಬಂಕ್ ಸಮೀಪದಲ್ಲಿರುವ ದಾಮೋದರ ಆರ್. ಸುವರ್ಣ ಎಜುಕೇಶನ್ ಟ್ರಸ್ಟ್ ಕಚೇರಿಯಲ್ಲಿ ಸಲ್ಲಿಸಬಹುದು.
ಅರ್ಹ ವಿದ್ಯಾರ್ಥಿಗಳನ್ನು ಪರಿಶೀಲನೆ ಬಳಿಕ ಆಯ್ಕೆ ಮಾಡಲಾಗುವುದು. 500ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮವು ನವೆಂಬರ್ 29ರಂದು ಬೆಳಗ್ಗೆ 10 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆಯಲಿದೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಈ ಮಹತ್ವದ ಅವಕಾಶವನ್ನು ಅರ್ಹ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.
BYV NEWS
Voice of Society • Truthful News • Genuine Reporting
