ಪದ್ಮರಾಜ್ ಆರ್. ಪೂಜಾರಿಗೆ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯಿಂದ ಅಭಿನಂದನೆ

ಪದ್ಮರಾಜ್ ಆರ್. ಪೂಜಾರಿಗೆ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯಿಂದ ಅಭಿನಂದನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಪದ್ಮರಾಜ್ ಆರ್. ಪೂಜಾರಿ ಅವರನ್ನು ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ), ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ) ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮೀಶ್ ಸುವರ್ಣ, ರಾಜ್ಯ ಪ್ರಮುಖರಾದ ಸಂದೀಪ್ ಪೂಜಾರಿ ಪಂಪುವೆಲ್, ಜಿಲ್ಲಾ ಜೊತೆ ಕಾರ್ಯದರ್ಶಿ ನಾಗೇಶ್ ಏಕ್ಕೂರು, ಜೊತೆ ಕೋಶಾಧಿಕಾರಿ ಕಿಶೋರ್ ಪೂಜಾರಿ ಮಂಚಿ, ಕದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ನಿರಂಜನ್ ಸಾಲಿಯಾನ್ ಹಾಗೂ ಸದಸ್ಯರಾದ ರಾಕೇಶ್ ಉಪಸ್ಥಿತರಿದ್ದರು.

ಪದ್ಮರಾಜ್ ಆರ್. ಪೂಜಾರಿ ಅವರಿಗೆ ಹೊಸ ಜವಾಬ್ದಾರಿಯಲ್ಲಿ ಯಶಸ್ಸು ದೊರೆಯಲಿ ಹಾಗೂ ಜಿಲ್ಲೆಯ ಜನರ ಸೇವೆಗೆ ಇನ್ನಷ್ಟು ಶಕ್ತಿ ಮತ್ತು ಅವಕಾಶ ಸಿಗಲಿ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ) ವತಿಯಿಂದ ಶುಭ ಹಾರೈಸಲಾಯಿತು.

ಗುರುದೇವ 🙏

BYVNEWS
#BYVNEWS #PadmarajRPoojary #DakshinaKannada #Congress #NarayanaGuru #SreeNarayanaGuruVicharaVedike #Mangaluru

Leave a Reply

Your email address will not be published. Required fields are marked *